- ವಿದ್ಯಾರ್ಥಿಗಳಲ್ಲಿರುವ ವಿವಿಧ ಕಲೆ ಹಾಗೂ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಅದಕ್ಕೊಂದು ವೇದಿಕೆ ಕಲ್ಪಿಸುವುದು.
- ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇದ್ದೇ ಇರುತ್ತದೆ ಹಾಗೂ ಅವರು ಅದಕ್ಕೆ ತಕ್ಕ ವಿಭಿನ್ನ ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾಸಕ್ತರನ್ನು ಒಂದೆಡೆಗೆ ಸೇರಿಸುವುದು.
- ಸುಪ್ತವಾದ ಪ್ರತಿಭೆಗಳನ್ನು ಹೊರತಂದು ಅದನ್ನು ಪ್ರಚುರಪಡಿಸುವುದಕ್ಕೊಸ್ಕರ ಒಂದು ವೇದಿಕೆಯನ್ನು ಕಲ್ಪಿಸುವುದು.
- ಕಲೆಗಳಲ್ಲಿ ಆಸಕ್ತರಾದ ಹಾಗೂ ಅದರಲ್ಲಿ ಈಗಾಗಲೇ ಪರಿಣಿತರಾದವರ ನಡುವೆ ಮುಕ್ತವಾದ ಮಂಥನ ನಡೆಸುವುದರ ಮೂಲಕ ಆಸಕ್ತರು ಪರಿಣಿತರಾಗುವುದರೆಡೆ ಶ್ರಮಿಸುವುದು.
- ವಿಶಿಷ್ಟ ರೀತಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಈ ಕಲೆಗಳಲ್ಲಿ ಪರಿಪೂರ್ಣತೆಯಸ್ನ್ನು ಪಡೆದುಕೊಳ್ಳುವುದು.
- ವಿಶೇಷ ಸಂಧರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ (ಉದಾ: ಅನಾಥಾಶ್ರಮ ವೃದ್ಧಾಶ್ರಮ ಹಳ್ಳಿ ಶಾಲೆಗಳು ಇತ್ಯಾದಿ) ರಂಗ ಪ್ರಯೋಗಗಳನ್ನು ನಡೆಸಿ ಸಾಮಾಜಿಕ ಜಾಗೃತಿ ತರುವುದು ಹಾಗೂ ವಿಶೇಷ ಅಭಿರುಚಿ ಬೆಳೆಸುವುದು.
- ನಮ್ಮ ತಂಡದಲ್ಲಿ ನಿರ್ವಹಣಾ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಬೆಳೆಸುವುದು.
- ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉತ್ತಮ ಜವಾಬ್ದಾರಿಯುತ ನಾಗರಿಕನಾಗುವುದಕ್ಕೆ ಯೋಗ್ಯವಾದ ಉಪನ್ಯಾಸಗಳನ್ನು ಏರ್ಪಡಿಸುವುದು.
- ಮೊದಲನೆಯದಾಗಿ ಆಸಕ್ತರನ್ನು ಕಲೆಗಳ ಆಧಾರದ ಮೇಲೆ ವಿಂಗಡಿಸುವುದು.
ಆ.ಅಭಿನಯದ ಆಧಾರದ ಮೇಲೆ
ಇ.ಸಾಹಿತ್ಯ ಪ್ರಕಾರಗಳ ಆಧಾರದ ಮೇಲೆ.
ಈ.ಸೃಜನಶೀಲ ಚಿಂತನೆಯ ಆಧಾರದ ಮೇಲೆ.
ಉ.ಸಾಮಾಜಿಕ ಚಿಂತನೆ ಮತ್ತು ಅಭಿವ್ಯಕ್ತಿಯ ಆಧಾರದ ಮೇಲೆ.
- ಪ್ರತಿ ಭಾನುವಾರ ಸುಮಾರು ಮೂರರಿಂದ ನಾಲ್ಕು ತಾಸು ಕಲೆಗಳ ಅಭ್ಯಾಸ ಅದ್ಯಯನ ಹಾಗೂ ವಿನಿಮಯಗಳಲ್ಲಿ ತೊಡಗಿಸಿಕೊಳ್ಳುವುದು.
- ಅದೇ ದಿನದಂದು ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಸೂಚನೆಗಳನ್ನು ಪಡೆಯುವುದು.
- ಚಿಂತನೆಗಳನ್ನು ವಿವಿಧ ಕಲಾಪ್ರಕಾರಗಳನ್ನು ಕಾಲೇಜಿನಲ್ಲಿ 'ಭಿತ್ತಿಪತ್ರಿಕೆ'ಗಳ ಮೂಲಕ ಹೊರಸೂಸುವುದು.
- ವಿವಿಧ ಕಾಲೇಜು ಅನಾಥಾಶ್ರಮ ಹಳ್ಳಿ ಶಾಲೆಗಳಲ್ಲಿ ಕಲೆಗಳನ್ನು ಪ್ರದರ್ಶಿಸುವುದು.
- ವಿವಿಧ ಅಂತರ್ಕಾಲೇಜು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
- ವರ್ಷಾಂತ್ಯದಲ್ಲಿ ಕಾಲೇಜಿನಲ್ಲಿ ಎರಡು ದಿನದ ಪೂರ್ಣ ಪ್ರಮಾಣದ ರಂಗ ಪ್ರದರ್ಶನ ನೀಡುವುದು.
this is reaaly a great job.....
ReplyDelete