Monday, November 15, 2010
ಒಂದು ಸೂಚನೆ
ದಯವಿಟ್ಟು blogನ್ನು follow ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ. ಅದು ಮಂಥನದ ಬಗ್ಗೆಯಾಗಲೀ ಅಥವಾ blog ನ ಬಗ್ಗೆ ಆಗಿರಲಿ. ನಿಮ್ಮ ಯಾವುದೇ ಲೇಖನಗಳನ್ನಾಗಲೀ, ಕವನಗಳನ್ನಾಗಲೀ ಪ್ರಕಟಿಸಬೇಕೆಂದರೆ ಅದನ್ನು ತಪ್ಪಿಲ್ಲದಂತೆ ಟೈಪ್ ಮಾಡಿ manthana.ubdt@gmail.com ಗೆ e-mail ಮೂಲಕ ಕಳುಹಿಸಿ.(ಪ್ರಕಟಣೆ ಮಾಡಲು ನೀವು ನಮ್ಮ ಯು.ಬಿ.ಡಿ.ಟಿ.ಕಾಲೇಜು ದಾವಣಗೆರೆಯ "ಮಂಥನ" ಸಂಘದ ಸದಸ್ಯರಾಗಿರಬೇಕು. )
Friday, November 12, 2010
ಮೊದಲ ದಿನ
ನಮ್ಮ ಮೊದಲ ದಿನದ ಕಾರ್ಯಕ್ರಮ ಇಲೆಕ್ಟ್ರಿಕಲ್ ವಿಭಾಗದ ರೂಂ. ನಂ. ೧೦೫ ರಲ್ಲಿ ದಿನಾಂಕ 31 .10 .2010 ರ ಬೆಳಿಗ್ಗೆ ನಡೆಯಿತು. ಸುಮಾರು ನಲವತ್ತಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಎಲ್ಲರೂ ವಿಭಿನ್ನ ಕಲೆಗಳಲ್ಲಿ ಆಸಕ್ತರಾಗಿದ್ದು ತಮ್ಮ ತಮ್ಮ ಪರಿಚಯವನ್ನು ಕೆಲವು ಕ್ಷಣಗಳ ಕಾಲ ಹೇಳಿಕೊಂಡರು. ಕೆಲವರು ಅಭಿನಯವನ್ನೂ ಮಾಡಿದರು,ಕೆಲವರು ಹಾಡು ಹೇಳಿದರು, ವಿಶೇಷವಾಗಿ ಆಗಮಿಸಿದ್ದ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿದ್ದ ಮೃತ್ಯುಂಜಯ ಅವರು ಹಾಗು ಜಗನ್ನಾಥ ಅವರು ಎಲ್ಲರೊಡನೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಸನ್ನಕುಮಾರ್ ಅವರು ಎಲ್ಲರೊಡನೆ ಸಂಭಾಷಣೆ ನಡೆಸಿ ಅವರವರ ಆಸಕ್ತಿಯ ವಿಷಯದ ಕುರಿತು ಕೇಳಿ ಅವರನ್ನು ಕೆಲವು ಗುಂಪುಗಳಾಗಿ ವಿಂಗಡಿಸಿದರು. ಶ್ರವಣ್ ನಾರಾಯಣ್ ಕಳೆದ ಸತತ ಮೂರು ವರ್ಷಗಳಿಂದ ನಮ್ಮ ಕಾಲೇಜಿನ "ಚೈತ್ರ" ಕಾರ್ಯಕ್ರಮದಲ್ಲಿ "ಚೈತ್ರಶ್ರೀ" ಪ್ರಶಸ್ತಿ ಪಡೆದವರು; ತಮಗೆ ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗುತ್ತಿದ್ದ ತೊಂದರೆಗಳನ್ನು ವಿವರಿಸಿ ನಂತರ "ಮಂಥನ" ದ ಮೂಲಕ ಒಂದು ಒಳ್ಳೆ ಕೆಲಸವಾಗುತ್ತಿದೆ ಎಂದು ಶ್ಲಾಘಿಸಿದರು. ಆಮೇಲೆ ಹಲವು ನಟರ ಮಿಮಿಕ್ರಿ ಮಾಡಿ ಎಲ್ಲರನ್ನೂ ರಂಜಿಸಿದರು. ನಂತರ ನಮ್ಮ ಕಲಾಸಕ್ತರನ್ನು ಐದು ತಂಡಗಳಾಗಿ ವಿಭಾಗಿಸಲಾಯಿತು.
ಕೊನೆಯಲ್ಲಿ ಗಿರೀಶ್ ಅವರ ಹಾಡು ಎಲ್ಲರನ್ನೂ ರಂಜಿಸಿತು. ಮೋಟಿವೇಷನಲ್ ವಿಡಿಯೋ ಒಂದನ್ನು ಪ್ರದರ್ಶಿಸಲಾಯಿತು. ಅದರ ನಂತರ ವಿಭಿನ್ನ ಗುಂಪಿನವರು ಸ್ವಲ್ಪ ಸಮಯ ಚರ್ಚೆ ನಡೆಸಿ ಮನೆಗೆ ತೆರಳಿದರು. ಅದರ ಕೆಲವು ಫೋಟೋಗಳು ನಿಮಗಾಗಿ:-

Saturday, October 30, 2010
ಮಂಥನ
ದೃಷ್ಟಿ ಕೋನ:-
ಆ.ಅಭಿನಯದ ಆಧಾರದ ಮೇಲೆ
ಇ.ಸಾಹಿತ್ಯ ಪ್ರಕಾರಗಳ ಆಧಾರದ ಮೇಲೆ.
ಈ.ಸೃಜನಶೀಲ ಚಿಂತನೆಯ ಆಧಾರದ ಮೇಲೆ.
ಉ.ಸಾಮಾಜಿಕ ಚಿಂತನೆ ಮತ್ತು ಅಭಿವ್ಯಕ್ತಿಯ ಆಧಾರದ ಮೇಲೆ.
- ವಿದ್ಯಾರ್ಥಿಗಳಲ್ಲಿರುವ ವಿವಿಧ ಕಲೆ ಹಾಗೂ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಅದಕ್ಕೊಂದು ವೇದಿಕೆ ಕಲ್ಪಿಸುವುದು.
- ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇದ್ದೇ ಇರುತ್ತದೆ ಹಾಗೂ ಅವರು ಅದಕ್ಕೆ ತಕ್ಕ ವಿಭಿನ್ನ ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾಸಕ್ತರನ್ನು ಒಂದೆಡೆಗೆ ಸೇರಿಸುವುದು.
- ಸುಪ್ತವಾದ ಪ್ರತಿಭೆಗಳನ್ನು ಹೊರತಂದು ಅದನ್ನು ಪ್ರಚುರಪಡಿಸುವುದಕ್ಕೊಸ್ಕರ ಒಂದು ವೇದಿಕೆಯನ್ನು ಕಲ್ಪಿಸುವುದು.
- ಕಲೆಗಳಲ್ಲಿ ಆಸಕ್ತರಾದ ಹಾಗೂ ಅದರಲ್ಲಿ ಈಗಾಗಲೇ ಪರಿಣಿತರಾದವರ ನಡುವೆ ಮುಕ್ತವಾದ ಮಂಥನ ನಡೆಸುವುದರ ಮೂಲಕ ಆಸಕ್ತರು ಪರಿಣಿತರಾಗುವುದರೆಡೆ ಶ್ರಮಿಸುವುದು.
- ವಿಶಿಷ್ಟ ರೀತಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಈ ಕಲೆಗಳಲ್ಲಿ ಪರಿಪೂರ್ಣತೆಯಸ್ನ್ನು ಪಡೆದುಕೊಳ್ಳುವುದು.
- ವಿಶೇಷ ಸಂಧರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ (ಉದಾ: ಅನಾಥಾಶ್ರಮ ವೃದ್ಧಾಶ್ರಮ ಹಳ್ಳಿ ಶಾಲೆಗಳು ಇತ್ಯಾದಿ) ರಂಗ ಪ್ರಯೋಗಗಳನ್ನು ನಡೆಸಿ ಸಾಮಾಜಿಕ ಜಾಗೃತಿ ತರುವುದು ಹಾಗೂ ವಿಶೇಷ ಅಭಿರುಚಿ ಬೆಳೆಸುವುದು.
- ನಮ್ಮ ತಂಡದಲ್ಲಿ ನಿರ್ವಹಣಾ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಬೆಳೆಸುವುದು.
- ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉತ್ತಮ ಜವಾಬ್ದಾರಿಯುತ ನಾಗರಿಕನಾಗುವುದಕ್ಕೆ ಯೋಗ್ಯವಾದ ಉಪನ್ಯಾಸಗಳನ್ನು ಏರ್ಪಡಿಸುವುದು.
- ಮೊದಲನೆಯದಾಗಿ ಆಸಕ್ತರನ್ನು ಕಲೆಗಳ ಆಧಾರದ ಮೇಲೆ ವಿಂಗಡಿಸುವುದು.
ಆ.ಅಭಿನಯದ ಆಧಾರದ ಮೇಲೆ
ಇ.ಸಾಹಿತ್ಯ ಪ್ರಕಾರಗಳ ಆಧಾರದ ಮೇಲೆ.
ಈ.ಸೃಜನಶೀಲ ಚಿಂತನೆಯ ಆಧಾರದ ಮೇಲೆ.
ಉ.ಸಾಮಾಜಿಕ ಚಿಂತನೆ ಮತ್ತು ಅಭಿವ್ಯಕ್ತಿಯ ಆಧಾರದ ಮೇಲೆ.
- ಪ್ರತಿ ಭಾನುವಾರ ಸುಮಾರು ಮೂರರಿಂದ ನಾಲ್ಕು ತಾಸು ಕಲೆಗಳ ಅಭ್ಯಾಸ ಅದ್ಯಯನ ಹಾಗೂ ವಿನಿಮಯಗಳಲ್ಲಿ ತೊಡಗಿಸಿಕೊಳ್ಳುವುದು.
- ಅದೇ ದಿನದಂದು ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಸೂಚನೆಗಳನ್ನು ಪಡೆಯುವುದು.
- ಚಿಂತನೆಗಳನ್ನು ವಿವಿಧ ಕಲಾಪ್ರಕಾರಗಳನ್ನು ಕಾಲೇಜಿನಲ್ಲಿ 'ಭಿತ್ತಿಪತ್ರಿಕೆ'ಗಳ ಮೂಲಕ ಹೊರಸೂಸುವುದು.
- ವಿವಿಧ ಕಾಲೇಜು ಅನಾಥಾಶ್ರಮ ಹಳ್ಳಿ ಶಾಲೆಗಳಲ್ಲಿ ಕಲೆಗಳನ್ನು ಪ್ರದರ್ಶಿಸುವುದು.
- ವಿವಿಧ ಅಂತರ್ಕಾಲೇಜು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
- ವರ್ಷಾಂತ್ಯದಲ್ಲಿ ಕಾಲೇಜಿನಲ್ಲಿ ಎರಡು ದಿನದ ಪೂರ್ಣ ಪ್ರಮಾಣದ ರಂಗ ಪ್ರದರ್ಶನ ನೀಡುವುದು.
Subscribe to:
Posts (Atom)